ಮಾಹಿತಿ ಸಂರಕ್ಷಣೆಯ ಆಧುನಿಕ ವ್ಯವಸ್ಥೆ - ಸುರಕ್ಷಿತ ಅಳವಡಕ ಪದರ 

ಇಂದಿನ ಜೀವನದ ಪ್ರತಿ ವಿಚಾರದಲ್ಲೂ ಸುರಕ್ಷತೆಗೆ ಬಹಳ ಪ್ರಾಮುಖ್ಯತೆ ಇದೆ. ಭೌತಿಕ ವಸ್ತುಗಳನ್ನು ಸುರಕ್ಷಿತವಾಗಿ ಕಾಪಾಡಲು ಹಲವಾರು ಸಾಧ್ಯತೆಗಳನ್ನು ಕಂಡುಕೊಳ್ಳಲಾಗಿದೆ. ಆದರೆ, ಗಣಕ ಪ್ರಪಂಚದಲ್ಲಿ ನಾವು ಬಳಸುವ ತಂತ್ರಾಂಶಗಳಾಗಲೀ, ನಾವು ಕಳುಹಿಸುವ ಮಾಹಿತಿಗಳಾಗಲೀ ಪರೋಕ್ಷವಾದ ಗುಣಗಳನ್ನು ಹೊಂದಿವೆ. ಈ ಪರೋಕ್ಷ ಅಥವಾ ಮಿಥ್ಯ ಜಗತ್ತಿನ ಸುರಕ್ಷತೆಯ ಬೇಡಿಕೆಗಳೇ ಬೇರೆ. ಸುರಕ್ಷಿತ ಅಳವಡಕ ಪದರ (Seಛಿuಡಿe Soಛಿಞeಣ ಐಚಿಥಿeಡಿ — SSಐ) ಇಂತಹ ಜಗತ್ತಿನ ತಂತ್ರಾಂಶಗಳು ಮತ್ತು ಮಾಹಿತಿಗಳಿಗೆ ಸುರಕ್ಷತೆಯನ್ನು ನೀಡಿ, ಅಲ್ಲಿನ ಬೇಡಿಕೆಗಳನ್ನು ಪೂರೈಸಲು ಮೂಡಿಬಂದ ಒಂದು ವಿಶಿಷ್ಟ ಪ್ರಯತ್ನ. 

ಎಸ್‍ಎಸ್‍ಎಲ್ ಅನ್ನು ಮೊಟ್ಟಮೊದಲು ಅಭಿವೃದ್ಧಿಪಡಿಸಿದ್ದು ವಿಶ್ವವಿಖ್ಯಾತ ಮಾಹಿತಿ ತಂತ್ರಜ್ಞಾನ ಸಂಸ್ಥೆ  ನೆಟ್‍ಸ್ಕೇಪ್. ಅವರು ತಮ್ಮ ಉತ್ಪಾದನೆಗಳ ಸುರಕ್ಷತೆಗಳಿಗಾಗಿ ಇದನ್ನು ಬಳಸಲಾರಂಭಿಸಿದರು. ಇದರ ಉಪಯುಕ್ತತೆಯನ್ನು ಕಂಡು ಅವರು ಇದನ್ನು ವಿಶ್ವದೆಲ್ಲಡೆ ಉಪಯೋಗಿಸಲು ಅನುಮತಿ ನೀಡಿದರು. ಈ ಕೊಡುಗೆ ಅಪೂರ್ವವಾದದ್ದೆಂದರೆ ಅತಿಶಯೋಕ್ತಿ ಅಲ್ಲ.
ಎಸ್‍ಎಸ್‍ಎಲ್ ಎಂದರೇನು?

ಅಂತರಜಾಲದಲ್ಲಿ ಮಾಹಿತಿಗಳು ಪದರಗಳ ಮೂಲಕ ಚಲಿಸುತ್ತವೆ. ಈ ಪದರಗಳನ್ನು ಅವು ನಿರ್ವಹಿಸುವ/ನಡೆಸುವ ಕಾರ್ಯಗಳ ಆಧಾರದ ಮೇಲೆ ವಿಂಗಡಿಸಲಾಗಿದೆ. ಸಂಚಲನಾ ಪದರ (ಖಿಡಿಚಿಟಿsಠಿoಡಿಣ ಟಚಿಥಿeಡಿ) ಇಂತಹ ಪದರಗಳಲ್ಲಿ ಒಂದು. ಪರಸ್ಪರ ಸಂಪರ್ಕಿಸಲು ಬಯಸುವ ಸಹಭಾಗಿಗಳ (ಠಿeeಡಿs) ನಡುವಿನ ಅಳವಡಕಗಳ (soಛಿಞeಣs) ಮೂಲಕ ಈ ಪದರವು ಸೂಕ್ತವಾದ ಸಂಬಂಧಗಳನ್ನು  (ಛಿoಟಿಟಿeಛಿಣioಟಿ) ಏರ್ಪಡಿಸುತ್ತದೆ. 

ಈ ಅಳವಡಕಗಳು ಮಿಥ್ಯವಾದರೂ, ಕಾರ್ಯನಿರ್ವಹಣೆಯಲ್ಲಿ ಭೌತಿಕ ವಿದ್ಯುತ್ ಅಳವಡಕಗಳಿಗೆ (eಟeಛಿಣಡಿiಛಿಚಿಟ soಛಿಞeಣs) ಸಮಾನವಾಗಿರುತ್ತವೆ. ಇವುಗಳು ಮಾಹಿತಿಗಳನ್ನು ಕಳುಹಿಸಲು/ಪಡೆಯಲು ಬಳಸಲಾಗುವ ಅಂತರ ಸಂಪರ್ಕ ಸಾಧನಗಳು (iಟಿಣeಡಿಜಿಚಿಛಿes).

ಗಣಕ ಕ್ಷೇತ್ರದಲ್ಲಿ ಮಾಹಿತಿಗಳ ವಿನಿಮಯಕ್ಕೆ ಸಂಚಲನಾ ಪದರದ ಮೂಲಕ ನಿರ್ಮಿಸಿದ ಸಂಬಂಧವನ್ನು ಬಳಸಲಾಗುವುದು. ಇಂತಹ ಸಂಚಲನಾ ಪದರಗಳಲ್ಲಿನ ಮಾಹಿತಿಗಳು ಪರಭಾರೆಯಾಗದಂತೆ ಅದಕ್ಕೆ ಒಂದು ಸುರಕ್ಷತಾ ಕವಚವು ಅವಶ್ಯವಾಗುತ್ತದೆ. ಇದಕ್ಕಾಗಿ ಅಭಿವೃದ್ಧಿಗೊಳಿಸಿದ ಕವಚವೇ ಸುರಕ್ಷಿತ ಅಳವಡಕ ಪದರ (Seಛಿuಡಿe Soಛಿಞeಣ ಐಚಿಥಿeಡಿ — SSಐ).  ಎಸ್‍ಎಸ್‍ಎಲ್ ಸೌಲಭ್ಯವು  ಸಂಚಲನಾ ಪದರ ಹಾಗೂ ಅದರಲ್ಲಿ ಬಳಸುವ ಚಾಲನಾ ಕ್ರಮಗಳನ್ನು (ಠಿಡಿoಣoಛಿoಟ) ರಕ್ಷಿಸುತ್ತದೆ. ಎಸ್‍ಎಸ್‍ಎಲ್ ಕೂಡ ಒಂದು ಬಗೆಯ ಚಾಲನಾ ಕ್ರಮ. ಇದು ಸಂಚಲನಾ ಪದರವನ್ನು ರಕ್ಷಣಾ ಹೊದಿಕೆಯಂತೆ ಆವರಿಸುವುದರಿಂದ, ಎಲ್ಲ ಬಗೆಯ ಮಾಹಿತಿಗಳನ್ನೂ ರಕ್ಷಿಸಬಲ್ಲದು ಮತ್ತು ಉಪಯೋಗಿಸಲು ಬಳಕೆದಾರರಿಗೆ ಅನುಕೂಲವಾಗಿದೆ. (ಚಿತ್ರ-1 ನೋಡಿ)

ಎಸ್‍ಎಸ್‍ಎಲ್ ನ ಅನುಕೂಲಗಳು (ಚಿಜvಚಿಟಿಣಚಿges)

ಪರಸ್ಪರ ಸಂಪರ್ಕಿಸಲು ಇಚ್ಚಿಸುವ ಸಹಭಾಗಿಗಳ (ಠಿeeಡಿ) ನಡುವೆ ಎಸ್‍ಎಸ್‍ಎಲ್ ಒಂದು ಸುರಕ್ಷಿತ ಮಾರ್ಗವನ್ನು ರಚಿಸುತ್ತದೆ. ಈ ಮಾರ್ಗವನ್ನು ಬಳಸಿ ಚಲಿಸುವ ಮಾಹಿತಿಗಳ ಗೌಪ್ಯತೆಯನ್ನು ಕಾಪಾಡುವುದು ಮತ್ತು ಮಾಹಿತಿಗಳು ತಮ್ಮ ನಿರ್ದಿಷ್ಟ ಗುರಿಯನ್ನು ಸರಿಯಾಗಿ, ಕಳುಹಿಸಿದ ಹಾಗೆಯೇ ತಲುಪುವಂತೆ ಮಾಡುವ ಜವಾಬ್ದಾರಿಯನ್ನು ಎಸ್‍ಎಸ್‍ಎಲ್ ನಿರ್ವಹಿಸುತ್ತದೆ. 

	ಈ ಸುರಕ್ಷತಾ ಕ್ರಮಗಳು ಸಂಪರ್ಕ ಕೇಂದ್ರಗಳ ನಡುವೆ ಚಲಿಸುವ ಮಾಹಿತಿಯ ಮೇಲೆ ಆಧಾರಿತವಾಗಿಲ್ಲ. ಇದರಿಂದಾಗಿ, ಎಸ್‍ಎಸ್‍ಎಲ್ ಬಹು ಉಪಯೋಗವಾಗಿದ್ದು ಎಲ್ಲೆಡೆ ಸುಲಭವಾಗಿ ಬಳಸಲು ಸಾಧ್ಯವಾಗಿದೆ.  ಒಂದು ದೈನಂದಿನ ಉದಾಹರಣೆ ಎಂದರೆ, ವಿ-ವಾಣಿಜ್ಯ (ವಿದ್ಯುನ್ಮಾನ ವಾಣಿಜ್ಯ e-ಛಿommeಡಿಛಿe) ಅಥವಾ ವಿ-ಬ್ಯಾಂಕಿಂಗ್ (ವಿದ್ಯುನ್ಮಾನ ಬ್ಯಾಂಕಿಂಗ್ e-bಚಿಟಿಞiಟಿg) ಸೌಲಭ್ಯ. ಇದು ಜನರಿಗೆ ಅವರಿಗೆ ಬೇಕಾದಾಗ, ಅವರಿಗೆ ಬೇಕಾದ ಮಾಹಿತಿಯು ಸುರಕ್ಷಿತವಾಗಿ ಲಭ್ಯವಾಗುವಂತೆ ಮಾಡಿದೆ. 
ಎಸ್‍ಎಸ್‍ಎಲ್ ಹೇಗೆ ಸುರಕ್ಷತೆ ನೀಡುತ್ತದೆ ?

ಎಸ್‍ಎಸ್‍ಎಲ್ ಒಂದು ಚಾಲನಾ ಕ್ರಮ (Pಡಿoಣoಛಿoಟ). ಇದು ಅಂತರಜಾಲದಲ್ಲಿ ಸುರಕ್ಷಿತ ಮಾಹಿತಿ ವಿನಿಮಯಕ್ಕೆ ಅಗತ್ಯವಾದ ನಿಯಮಗಳನ್ನು ಸೂಚಿಸುತ್ತದೆ. ಎಸ್‍ಎಸ್‍ಎಲ್ ಅಳವಡಿಸುವ ಎಲ್ಲಾ ಜಾಲತಾಣಗಳೂ (ತಿebsiಣe) ಈ ನಿಯಮಗಳಿಗೆ ಬದ್ಧವಾಗಿರುತ್ತವೆ.

ಸುರಕ್ಷತೆ ನೀಡಲು ಎಸ್‍ಎಸ್‍ಎಲ್ ಎರಡು ಬಗೆಯ ಚಾಲನಾ ಕ್ರಮಗಳನ್ನು ಬಳಸುತ್ತದೆ. ಒಂದು ಎಸ್‍ಎಸ್‍ಎಲ್ ದಾಖಲೆ ಚಾಲನಾ ಕ್ರಮ ಮತ್ತೊಂದು ಎಸ್‍ಎಸ್‍ಎಲ್ ಹಸ್ತಮಿಲನ ಚಾಲನಾ ಕ್ರಮ (SSಐ hಚಿಟಿಜshಚಿಞe Pಡಿoಣoಛಿoಟ). ಈ ಎರಡೂ ಚಾಲನಾ ಕ್ರಮಗಳು ಒಂದನ್ನೊಂದು ನಿಕಟವಾಗಿ ಅವಲಂಬಿಸಿವೆ. ಈ ಚಾಲನಾ ಕ್ರಮಗಳ ಬಗ್ಗೆ ಈಗ ಇನ್ನೂ ಸ್ವಲ್ಪ ತಿಳಿಯೋಣ.

ಎಸ್‍ಎಸ್‍ಎಲ್ ದಾಖಲೆ ಚಾಲನಾ ಕ್ರಮ (SSಐ ಖeಛಿoಡಿಜ Pಡಿoಣoಛಿoಟ)

ಇದು ಸಹಭಾಗಿ ಸಾಧನಗಳ ನಡುವೆ ಚಲಿಸುವ ಮಾಹಿತಿಯ ರೂಪದ (ಜಚಿಣಚಿ ಜಿoಡಿmಚಿಣ) ಬಗ್ಗೆ ವಿವರಣೆ ನೀಡುತ್ತದೆ. ಮಾಹಿತಿಯು ಎಷ್ಟು ಉದ್ದವಿರಬೇಕು ಎಷ್ಟು ಅಂಶಗಳನ್ನು ಹೊಂದಿರಬೇಕು ಯಾವ ಅಂಶಗಳನ್ನು ಹೊಂದಿರಬೇಕು ಮುಂತಾದ ವಿವರಗಳನ್ನು ವಿವರವಾಗಿ ತಿಳಿಸುತ್ತದೆ. 

ಈ ವಿವರಗಳನ್ನು ಬಳಸಿ ಸಹಭಾಗಿಗಳು ಪರಸ್ಪರ ವ್ಯವಹರಿಸಲು ಆರಂಭಿಸುತ್ತವೆ. ಅವುಗಳ ನಡುವೆ ಚಲಿಸುವ ಮಾಹಿತಿಯ ರೂಪವು ಒಂದೇ ಬಗೆಯದಾಗಿದ್ದು, ಇದರಿಂದ ಸಹಭಾಗಿಗಳು (ಠಿeeಡಿs) ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ.

ಈ ಚಾಲನಾ ಕ್ರಮದಲ್ಲಿ, ಮಾಹಿತಿ ಕಳುಹಿಸುವ ಹಾಗೂ ಮಾಹಿತಿ ಪಡೆಯುವ ಎರಡೂ ಕಡೆಗಳಲ್ಲಿ ಮಾಹಿತಿಯ ಮೇಲೆ ಸ್ವಲ್ಪ ಮಟ್ಟಿನ ಮಾಹಿತಿ ಸಂಸ್ಕರಣೆ ನಡೆಯುತ್ತದೆ. ಅವು ಕೆಳಕಂಡಂತಿವೆ:
ಮಾಹಿತಿ ಕಳುಹಿಸುವ ಕಡೆ:
ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ, ಅದನ್ನು ಚಿಕ್ಕ ಚಿಕ್ಕ ಭಾಗಗಳಾಗಿ/ದಾಖಲೆಗಳಾಗಿ ವಿಂಗಡಿಸಲಾಗುತ್ತದೆ (ಈಡಿಚಿgmeಟಿಣಚಿಣioಟಿ). ಚಿಕ್ಕ ಚಿಕ್ಕ ಭಾಗಗಳನ್ನು ಅಂತರಜಾಲದ ಮೂಲಕ ಕಳುಹಿಸುವುದು ಸುಲಭ.
ಹೀಗೆ ವಿಂಗಡಿತವಾದ ಮಾಹಿತಿಯನ್ನು ಹೆಚ್ಚಿನ ಸುರಕ್ಷತೆಗಾಗಿ ಸಂಕುಚಿತಗೊಳಿಸಬಹುದು. ಸಂಕುಚಿತಗೊಳಿಸಿದ ಮಾಹಿತಿಯನ್ನು ಕಾಪಾಡುವುದು ಸುಲಭವಾಗುತ್ತದೆ.
ಈ ಸಂಕುಚಿತ ಮಾಹಿತಿಗೆ ತನ್ನದೇ ಆದ ಒಂದು ವಿಶಿಷ್ಟ ದೃಢೀಕರಣ ಚಿಹ್ನೆ (ಂuಣheಟಿಣiಛಿಚಿಣioಟಿ ಛಿoಜe) ನೀಡಲಾಗುತ್ತದೆ. ಇದರಿಂದ ಮಾಹಿತಿಯ ಸುರಕ್ಷತೆ ಖಚಿತವಾಗುತ್ತದೆ ಮತ್ತು ಇದು ಮೂರನೆಯವರು ಮಾಹಿತಿಯನ್ನು ಮಧ್ಯದಲ್ಲಿ ತಡೆಯುವುದನ್ನು ಕಠಿಣಗೊಳಿಸುತ್ತದೆ. 
ಮಾಹಿತಿಯನ್ನು ಈಗ ಗೂಢಲಿಪೀಕರಿಸಲಾಗುತ್ತದೆ (eಟಿಛಿಡಿಥಿಠಿಣioಟಿ). ಮಾಹಿತಿಗಳನ್ನು ಕಳುಹಿಸುವ ಹಾಗೂ ಪಡೆಯುವವರ ನಡುವೆ ಒಪ್ಪಿರುವ ಗುಪ್ತಕೀಲಿಯ (seಛಿಡಿeಣ ಞeಥಿ) ಆಧಾರದ ಮೇಲೆ ಗೂಢಲಿಪೀಕರಣೆಯು ನಡೆಯುತ್ತದೆ. ಹೀಗಾಗಿ, ಇವರಿಬ್ಬರನ್ನು ಹೊರೆತು ಬೇರೆಯವರು ಮಾಹಿತಿಯನ್ನು ಗ್ರಹಿಸಲು ಯತ್ನಿಸಿದರೂ ಅದು ಅಸಾಧ್ಯವಾಗುತ್ತದೆ. ಇದರಿಂದ ಮಾಹಿತಿಯು ಈಗ ಸಂಪೂರ್ಣವಾಗಿ ಸುರಕ್ಷತವಾಗಿರುತ್ತದೆ. 
ಮಾಹಿತಿ ಪಡೆಯುವ ಕಡೆ:
ಇಲ್ಲಿ ಮಾಹಿತಿಗಳನ್ನು ಕಳುಹಿಸುವ ಕಡೆ ನಡೆಸಿದ ಸಂಸ್ಕರಣಾ ಕಾರ್ಯಗಳನ್ನು ಹಿಮ್ಮರಳಿಸಿ, ಮಾಹಿತಿಯನ್ನು ಅದರ ಮೊದಲಿನ ರೂಪಕ್ಕೆ ತರಲಾಗುತ್ತದೆ. ಇಲ್ಲಿ ನಡೆಯುವ ಕಾರ್ಯಗಳು ಹೀಗಿವೆ:
ಗೂಢಲಿಪೀಕೃತ ಮಾಹಿತಿಯನ್ನು ಗೂಢಲಿಪಿಗ್ರಹಣ (ಜeಛಿಡಿಥಿಠಿಣ) ಮಾಡಲಾಗುತ್ತದೆ.
ದೃಢೀಕರಣ ಚಿಹ್ನೆಯನ್ನು (ಂuಣheಟಿಣiಛಿಚಿಣioಟಿ ಛಿoಜe) ಪರೀಕ್ಷಿಸಲಾಗುತ್ತದೆ. ಇದರಿಂದ ಮೂರನೆಯವರು ಯಾರಾದರೂ ಮಾಹಿತಿಯನ್ನು ಬದಲಾಯಿಸಿದ್ದರೆ ಅದನ್ನು ಕಂಡುಹಿಡಿಯಬಹುದು.
ಇದಾದ ನಂತರ, ಸಂಕುಚಿತಗೊಳಿಸಿದ ಮಾಹಿತಿಯನ್ನು ಗುಪ್ತಕೀಲಿಯ ಸಹಾಯದಿಂದ ವಿಸ್ತರಿಸಲಾಗುವುದು (ಜeಛಿomಠಿಡಿess).
ವಿಸ್ತರಿಸಿದ ಮಾಹಿತಿಯನ್ನು ಜೋಡಿಸಿ ಅದರ ಮೂಲರೂಪಕ್ಕೆ ತರಲಾಗುವುದು.
ಇವೆಲ್ಲಾ ಕಾರ್ಯಗಳು ಮಾಹಿತಿಯನ್ನು ಸಂರಕ್ಷಿಸುವುದರಲ್ಲಿ ಅತಿಮುಖ್ಯವಾಗಿವೆ. ಈ ಕಾರ್ಯಗಳ ಸಹಾಯದಿಂದ ಈಗ ಮಾಹಿತಿಯನ್ನು ಸಂರಕ್ಷಿಸುವುದರಲ್ಲಿ ಯಶಸ್ವಿಯಾದರೂ ಮಾಹಿತಿಯು ಚಲಿಸುವ ಮಾರ್ಗ ಇನ್ನೂ ಅರಕ್ಷಿತವಾಗಿರುತ್ತದೆ. ಆದನ್ನು ಹೇಗೆ ಸುರಕ್ಷಿತಗೊಳಿಸುವುದು? ಈ ಪ್ರಶ್ನಗೆ ಉತ್ತರವಾಗಿ ರಚಿತಗೊಂಡ ಚಾಲನಾ ಕ್ರಮವೇ ಎಸ್‍ಎಸ್‍ಎಲ್ ಹಸ್ತಮಿಲನ ಚಾಲನಾ ಕ್ರಮ (SSಐ hಚಿಟಿಜshಚಿಞe ಠಿಡಿoಣoಛಿoಟ). 
ಎಸ್‍ಎಸ್‍ಎಲ್ ಹಸ್ತಮಿಲನ ಚಾಲನಾ ಕ್ರಮ (SSಐ ಊಚಿಟಿಜshಚಿಞe Pಡಿoಣoಛಿoಟ)
ಎಸ್‍ಎಸ್‍ಎಲ್ ಹಸ್ತಮಿಲನ ಚಾಲನಾ ಕ್ರಮವು ಮಾಹಿತಿಯನ್ನು ಪಡೆಯಲು ಇಚ್ಛಿಸಿದ ಗ್ರಾಹಕ ಹಾಗೂ ಮಾಹಿತಿಯನ್ನು ಒದಗಿಸುವ ಸೇವಕ ವ್ಯವಸ್ಥೆಗಳನ್ನು (seಡಿveಡಿ) ದೃಢೀಕರಿಸುತ್ತದೆ (ಈ ಸನ್ನಿವೇಶದಲ್ಲಿ,  ಮಾಹಿತಿಯನ್ನು ಕಳುಹಿಸುವ ಕೇಂದ್ರಗಳನ್ನು `ಸೇವಕ ಎಂದೂ, ಮಾಹಿತಿಯನ್ನು ಪಡೆಯುವ  ಕೇಂದ್ರಗಳನ್ನು `ಗ್ರಾಹಕ ಎಂದೂ ಕರೆಯಲಾಗಿದೆ).
ಗ್ರಾಹಕ ಹಾಗೂ ಸೇವಕರನ್ನು ಗುರುತಿಸಿ ದೃಢೀಕರಿಸಲು, ಪ್ರಮಾಣ ಪತ್ರಗಳನ್ನು (ಛಿeಡಿಣiಜಿiಛಿಚಿಣe) ಬಳಸಲಾಗುತ್ತದೆ. ಈ ಪ್ರಮಾಣ ಪತ್ರಗಳನ್ನು ದೃಢೀಕರಣ ಪ್ರಾಧಿಕಾರಗಳಿಂದ (ಛಿeಡಿಣiಜಿಥಿiಟಿg ಚಿuಣhoಡಿiಣಥಿ — ಅಂ) ಪಡೆಯಬಹುದು. ಈ ಪ್ರಮಾಣ ಪತ್ರಗಳಲ್ಲಿ ಗ್ರಾಹಕ/ಸೇವಕರ ಎಲ್ಲಾ ವಿವರಗಳು, ಪ್ರಮಾಣಪತ್ರದ ಜೀವಾವಧಿ, ಪ್ರಮಾಣಪತ್ರ ನೀಡಿದ ಪ್ರಾಧಿಕಾರದ ವಿವರಗಳು ಮುಂತಾದ ಮಾಹಿತಿಗಳು ಇರುತ್ತವೆ. ಹೀಗಾಗಿ, ಗ್ರಾಹಕನು ಸೇವಕನಿಗೆ ಅಥವಾ ಸೇವಕನು ಗ್ರಾಹಕನಿಗೆ ಈ ಪ್ರಮಾಣ ಪತ್ರವನ್ನು ಪ್ರಸ್ತುತಪಡಿಸಿದಾಗ, ಅವರ ಬಗ್ಗೆ ಎಲ್ಲಾ ವಿವರಗಳು ತಿಳಿದುಬರುತ್ತವೆ. ಇದರಿಂದಾಗಿ ಒಬ್ಬರನ್ನೊಬ್ಬರು ದೃಢೀಕರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಸಫಲ ದೃಢೀಕರಣದ ನಂತರ, ಗ್ರಾಹಕ-ಸೇವಕರ ನಡುವೆ ಮಾಹಿತಿ ಚಾಲನೆಗೆ ಹಸಿರು ನಿಶಾನೆ ದೊರಕಿ, ಮುಂದಿನ ಹಂತಗಳು ಪ್ರಾರಂಭವಾಗುತ್ತವೆ.
ಮುಂದಿನ ಹಂತದಲ್ಲಿ, ಗ್ರಾಹಕ-ಸೇವಕರ ನಡುವೆ ಮಾಹಿತಿ ಚಾಲನೆಗೆ ಬೇಕಾಗುವ ವಿವರಗಳು ಹಾಗೂ ಮಾಹಿತಿ ಸಂಚಲನ ಮಾರ್ಗದ ರಕ್ಷಣೆಗೆ ಬೇಕಾಗುವ ವಿವರಗಳು ಸ್ಪಷ್ಟಗೊಳ್ಳುತ್ತವೆ. ಇವುಗಳಲ್ಲಿ ಕೆಲವನ್ನು ಕೆಳಗೆ ನೀಡಲಾಗಿದೆ:
ಗ್ರಾಹಕ-ಸೇವಕರ ನಡುವೆ ಯಾವ ಕಾರ್ಯಗಳು ನಡೆಯಬೇಕು, ಅವುಗಳನ್ನು ನಡೆಸುವ ವಿಧಾನ, ಅವುಗಳನ್ನು ನಡೆಸಲು ಬೇಕಾದ ಕ್ರಮಾವಳಿ (ಚಿಟgoಡಿiಣhm) 
ಮಾಹಿತಿ ಸಂಚಲನಕ್ಕೆ ಬೇಕಾದ ಚಾಲನಾ ಕ್ರಮ (ಠಿಡಿoಣoಛಿoಟ) 
ಗೂಢಲಿಪೀಕರಣಕ್ಕೆ ಬಳಸಲಾಗುವ ಕ್ರಮಾವಳಿ (eಟಿಛಿಡಿಥಿಠಿಣioಟಿ ಚಿಟgoಡಿiಣhm) 
ಗೂಢಲಿಪಿಗ್ರಹಣಕ್ಕೆ ಬಳಸಲಾಗುವ ಕ್ರಮಾವಳಿ (ಜeಛಿಡಿಥಿಠಿಣioಟಿ ಚಿಟgoಡಿiಣhm)
ಮಾಹಿತಿಯನ್ನು ಸಂಕುಚಿತಗೊಳಿಸಲು ಬಳಸುವ ಕ್ರಮಾವಳಿ (ಛಿomಠಿಡಿessioಟಿ ಚಿಟgoಡಿiಣhm)
ಮಾಹಿತಿಯನ್ನು ವಿಸ್ತರಿಸಲು ಬಳಸುವ ಕ್ರಮಾವಳಿ (ಜeಛಿomಠಿಡಿessioಟಿ ಚಿಟgoಡಿiಣhm)
ದೃಢೀಕರಣ ಚಿಹ್ನೆ (ಂuಣheಟಿಣiಛಿಚಿಣioಟಿ ಛಿoಜe) ಪಡೆಯಲು ಬಳಸುವ ಕ್ರಮಾವಳಿ
ಪ್ರಮಾಣ ಪತ್ರಗಳು 
ಗುಪ್ತ ಕೀಲಿಗಳು (seಛಿಡಿeಣ ಞeಥಿs)
ಈ ಮುಂತಾದ ವಿವರಗಳು ಗ್ರಾಹಕ ಸೇವಕರಲ್ಲಿ ಪರಸ್ಪರ ವಿನಿಮಯವಾಗುತ್ತವೆ. ಈ ರೀತಿಯ ವಿವರಗಳನ್ನು ಆಧರಿಸಿ ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆ ಪರಸ್ಪರ ಒಪ್ಪಂದಕ್ಕೆ ಬರಲಾಗುತ್ತದೆ. ಈ ಒಪ್ಪಂದವನ್ನು ಅನುಸರಿಸಿ, ಮಾರ್ಗವನ್ನು ಸುರಕ್ಷಿತಗೊಳಿಸಿದ ನಂತರ ಮಾಹಿತಿಗಳ ಸಂಚಲನೆ ಪ್ರಾರಂಭವಾಗುತ್ತದೆ.
ಆದರೆ ಈ ಮೇಲೆ ಹೇಳಿರುವ ವಿಷಯಗಳಲ್ಲಿ ಕೇವಲ ಒಂದು ವಿಷಯದ ಮೇಲೆ ಒಪ್ಪಂದಕ್ಕೆ ಬರಲಾಗದಿದ್ದರೂ, ಗ್ರಾಹಕ-ಸೇವಕರ ನಡುವೆ ಮಾಹಿತಿ ಸಂಚಲನ ನಡೆಸಲು ಸಾಧ್ಯವಾಗುವುದಿಲ್ಲ. ಈ ರೀತಿಯ ಬಹುರೂಪಿ ಒಪ್ಪಂದಗಳು ಮಾತ್ರ ಮಾಹಿತಿಯ ಸಂಚಲನೆಯನ್ನು ಸಂಪೂರ್ಣ ಸುರಕ್ಷತೆಯಲ್ಲಿ ನಡೆಸಲು ಅನುಮತಿ ನೀಡುತ್ತದೆ. ಹೀಗಾಗಿ ಗ್ರಾಹಕ ಮತ್ತು ಸೇವಕ ಇಬ್ಬರೂ ಒಬ್ಬರನ್ನೊಬ್ಬರು ನಂಬಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ.
ಸುರಕ್ಷತಾ ಕ್ರಮಗಳು ಅಳವಡಿಸಿದ ಬಗ್ಗೆ ನಮಗೆ ಹೇಗೆ ತಿಳಿಯುತ್ತದೆ ?
ಇಷ್ಟೆಲ್ಲಾ ಸುರಕ್ಷತಾ ವ್ಯವಸ್ಥೆಯಿರುವುದು ಬಳಕೆದಾರರಿಗೆ ತಿಳಿದರೆ ಮಾತ್ರ ಅವರಿಗೆ ಸೂಕ್ತ ನಂಬಿಕೆಯು ಉಂಟಾಗುತ್ತದೆ. ವಿ-ವಾಣಿಜ್ಯ/ವಿ-ಬ್ಯಾಂಕಿಂಗ್‍ನಂತಹ ಅತಿ ಸೂಕ್ಷ್ಮ ವ್ಯವಹಾರಗಳಲ್ಲಿ, ಬಳಕೆದಾರರಿಗೆ ತಮ್ಮ ವ್ಯವಹಾರಗಳ ಗೌಪ್ಯತೆ ಖಚಿತವಾಗುವುದು ಅತ್ಯಾವಶ್ಯಕ.  
ಅಂತರಜಾಲದಲ್ಲಿ, ಸಾಧಾರಣವಾಗಿ ವಿಳಾಸಗಳನ್ನು (iಟಿಣeಡಿಟಿeಣ ಚಿಜಜಡಿess oಡಿ Uಖಐ) hಣಣಠಿ://…… ಎಂದು ಸೂಚಿಸಲಾಗುತ್ತದೆ. ಇದು ಅಲ್ಲಿ ಬಳಸಲಾದ ಚಾಲನಾ ಕ್ರಮವನ್ನು ಆಧರಿಸಿರುತ್ತದೆ. ಸಾಧಾರಣ ಚಾಲನಾ ಕ್ರಮದ ಜೊತೆಗೆ ಎಸ್‍ಎಸ್‍ಎಲ್ ಸುರಕ್ಷಿತ ಚಾಲನಾ ಕ್ರಮವನ್ನು ಬಳಸುವ ವಿಳಾಸಗಳನ್ನು hಣಣಠಿs://  ಎಂದು ಸೂಚಿಸಿರಲಾಗುತ್ತದೆ. ಹೆಚ್ಚಿನ ಅಕ್ಷರವಾದ `s  ಸುರಕ್ಷತೆಯ ಸಂಕೇತ. 
hಣಣಠಿs:// ಎಂದು ಸೂಚಿಸಲ್ಪಟ್ಟ ವಿಳಾಸಗಳಲ್ಲಿ ನಡೆಯುವ ಎಲ್ಲಾ ವ್ಯವಹಾರಗಳೂ ಗೌಪ್ಯವೆಂದು ವಿಶ್ವಾಸವಾಗಿ ಹೇಳಬಹುದು.
ಅಂತರಜಾಲದ ಜಗತ್ತು ಅತಿ ದೊಡ್ಡ ಜಗತ್ತು. ಅದಕ್ಕೆ ಪ್ರಾರಂಭವಾಗಲೀ ಕೊನೆಯಾಗಲೀ ಇಲ್ಲ. ಈ ಜಗತ್ತಿನ ಒಂದು ವಿಶೇಷವೆಂದರೆ ಇಲ್ಲಿ ಇರುವುದೆಲ್ಲಾ ಪರೋಕ್ಷ. ಇಂತಹ ಜಗತ್ತನ್ನು ರಕ್ಷಿಸುವುದು ಬಹಳ ಕಠಿಣ. ಈ ದಿಶೆಯಲ್ಲಿ ಎಸ್‍ಎಸ್‍ಎಲ್ ಒಂದು ಮಹತ್ವದ ಸಫಲ ಪ್ರಯೋಗ. ಇದು ಬೆಳೆದು ಹೆಚ್ಚಿನ ಪ್ರಗತಿ ಹೊಂದುವ ಹಂತದಲ್ಲಿದೆ. 

ಚಿತ್ರ: ಈ ಚಿತ್ರದಲ್ಲಿ, ಸಂಚಲನಾ ಪದರಕ್ಕೂ ಬಳಕೆದಾರರ ಮಾಹಿತಿಗೂ ನಡುವೆ ಒಂದು ರಕ್ಷಣಾ ಪದರ ಅಡಕವಾಗಿರುವುದನ್ನು ಕಾಣಬಹುದು. ಈ ಪದರವೇ ಎಸ್‍ಎಸ್‍ಎಲ್. ಈ ಪದರವು ಎಲ್ಲಾ ಬಗೆಯ ಮಾಹಿತಿಗಳನ್ನು ಆವರಿಸಿ ಸೂಕ್ತ ಸುರಕ್ಷೆ ನೀಡುವುದು.
1) ಗೂಢಲಿಪೀಕರಣ (ಇಟಿಛಿಡಿಥಿಠಿಣioಟಿ)
ಇದು ಮಾಹಿತಿಯನ್ನು ಸುರಕ್ಷಿತಗೊಳಿಸಲು ಬಳಸುವ ವಿಧಾನ. ಈ ವಿಧಾನದಲ್ಲಿ, ಮಾಹಿತಿಯನ್ನು ವಿಶಿಷ್ಟವಾದ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಈ ಪರಿವರ್ತನೆಗೆ ಸೂಕ್ತ ಕ್ರಮಾವಳಿಗಳನ್ನೂ, ಗುಪ್ತ ಕೀಲಿಗಳನ್ನೂ ಬಳಸಲಾಗುತ್ತದೆ. ಹೀಗೆ ಪರಿವರ್ತಿಸಿದ ಮಾಹಿತಿಯನ್ನು ತನ್ನ ಮೂಲ ರೂಪಕ್ಕೆ ಮರುಪರಿವರ್ತಿಸಲು, ಅದೇ ಗುಪ್ತ ಕೀಲಿಗಳನ್ನು ಹಾಗೂ ಕ್ರಮಾವಳಿಗಳನ್ನು ಬಳಸಬೇಕು. 
2) ಗೂಢಲಿಪಿಗ್ರಹಣ (ಆeಛಿಡಿಥಿಠಿಣioಟಿ)
ಇದು, ಗೂಢಲಿಪಿಕರಿಸಿದ ಮಾಹಿತಿಯನ್ನು ತನ್ನ ಮೂಲ ರೂಪಕ್ಕೆ ಮರುಪರಿವರ್ತಿಸುವ ವಿಧಾನ. ಮೇಲೆ ಹೇಳಿದಂತೆ, ಈ ವಿಧಾನದಲ್ಲೂ ಗುಪ್ತ ಕೀಲಿಗಳನ್ನು ಹಾಗೂ ಕ್ರಮಾವಳಿಗಳನ್ನು ಬಳಸಲಾಗುತ್ತದೆ.
3) ಕ್ರಮಾವಳಿ (ಂಟgoಡಿiಣhm)
ಇದು, ಯಾವುದೇ ಕಾರ್ಯ ನಿರ್ವಹಿಸಲು ಬಳಸುವ ವಿಧಾನ ಹಾಗೂ ಕ್ರಮಗಳ ವಿವರಗಳನ್ನು ಸೂಚಿಸುವ ಪಟ್ಟಿ.
4) ಚಾಲನಾ ಕ್ರಮ (Pಡಿoಣoಛಿoಟ) 
ಇದು, ಮಾಹಿತಿ ಚಲಿಸಲು ಬಳಸುವ ನಿಯಮಗಳನ್ನು ಸೂಚಿಸುವ ವಿವರವಾದ ಪಟ್ಟಿ. 
5) ಅಂತರಜಾಲ (Iಟಿಣeಡಿಟಿeಣ)
ಇದು ವಿಶ್ವದೆಲ್ಲೆಡೆ ಇರುವ ವಿವಿಧ ಬಗೆಯ, ವಿವಿಧ ಮಾಹಿತಿಯುಳ್ಳ ಗಣಕಗಳನ್ನು ಸಂಪರ್ಕಿಸುವ ಜಾಲ. ಈ ಜಾಲವನ್ನು ಬಳಸಿ, ಒಂದು ಗಣಕವು ಮತ್ತೊಂದು ಗಣಕದಲ್ಲಿರುವ ಮಾಹಿತಿಯನ್ನು ಪಡೆಯಬಹುದು.

(ಶ್ವೇತಾ ಜೋಯಿಸ್ ಎಂ ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ